ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ ಜಾಲ
Share
ಮನೆ ಬಾಗಿಲಲ್ಲೇ ಚಿಟ್ಟಾಣಿ ‘ಅರ್ಜುನ’ ಸ್ವಾಗತ

ಲೇಖಕರು : ಎಸ್.ಜಿ. ಕುರ್ಯ, ಉಡುಪಿ
ಮ೦ಗಳವಾರ, ಡಿಸೆ೦ಬರ್ 17 , 2013
ಆ ಮನೆಗೆ ನೀವು ಹೋದರೆ 24 ಗಂಟೆಯೂ ಬಾಗಿಲಲ್ಲೇ ಅರ್ಜುನ ವೇಷಧಾರಿ ಚಿಟ್ಟಾಣಿ ಕೈ ಮುಗಿದು, ನಸು ನಕ್ಕು ಸ್ವಾಗತಿಸುತ್ತಾರೆ...ಪದ್ಮಶ್ರೀ ಪುರಸ್ಕೃತ, ಯಕ್ಷಗಾನ ರಂಗದ ಮೇರು ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮನೆಯ ಎದುರು ಬಾಗಿಲಲ್ಲಿ ಅರ್ಜುನ ವೇಷದ ಕಲಾಕೃತಿಯನ್ನು ಕುಮಟಾ ಮೂರೂರು ಕಲ್ಲಬ್ಬೆಯ ಶಿವರಾಮ ಆಚಾರಿ ಚಿಟ್ಟಾಣಿಯೇ ಬಾಗಿಲಲ್ಲಿ ಜೀವ ತಳೆದಂತೆ ರೂಪಿಸಿದ್ದಾರೆ.

ಹೊನ್ನಾವರದಿಂದ 20 ಕಿ.ಮೀ. ದೂರದ ಗೇರುಸೊಪ್ಪ ರಸ್ತೆಯಲ್ಲಿ ಚಿಟ್ಟಾಣಿ ಮನೆಯಿದೆ. ವರ್ಷದ ಹಿಂದೆ 25ರಿಂದ 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಗೃಹಪ್ರವೇಶೋತ್ಸವ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆದಿತ್ತು.

ಈ ಸಂದರ್ಭ ಚಿಟ್ಟಾಣಿ ಬಾಗಿಲ ಕಲಾಕೃತಿ ರಚಿಸಿದ ಪುಣ್ಯಾತ್ಮ ಯಾರೆಂದು ಶ್ರೀಪಾದರು ಪ್ರಶ್ನಿಸಿ, ಗುರುತಿಸಿ ಶ್ಲಾಘಿಸಿದ್ದರು. ಮನೆ ನಿರ್ಮಾಣಕ್ಕಾಗಿ ಬಾಗಿಲ ಚೌಕಟ್ಟು ರೂಪಿಸುವ ಸಂದರ್ಭವೇ ಚಿಟ್ಟಾಣಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂತು. ಈ ಅವಕಾಶವನ್ನೇ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬಳಸಲು ಶಿಕ್ಷಕ ಹಾಗೂ ಯಕ್ಷಗಾನ ಕಲಾವಿದರಾದ ಸಹೋದರ ಸುಬ್ರಾಯ ಆಚಾರಿ ಸಲಹೆಯಂತೆ, ಚಿಟ್ಟಾಣಿ ವೇಷದ ಚಿತ್ರವನ್ನು ಎದುರಿಗಿಟ್ಟು, ಚಿಟ್ಟಾಣಿಯವರನ್ನೂ ಎದುರು ನಿಲ್ಲಿಸಿ ಪಟ್ಟ ಒಂದು ತಿಂಗಳ ಶ್ರಮ 5ಸಿಎಫ್‌ಟಿ ಸಾಗುವಾನಿ ಮರದಲ್ಲಿ ಸೊಗಸಾಗಿ ಮೂಡಿಬಂದಿದೆ.

ಪದ್ಮಶ್ರೀ ಪ್ರಶಸ್ತಿ ಹಿನ್ನೆಲೆಯಲ್ಲಿ ಕುಮಟಾದಲ್ಲಿ ನಡೆದ ವಿಶ್ವಕರ್ಮ ಸಮ್ಮೇಳನದಲ್ಲಿ ಚಿಟ್ಟಾಣಿಯವರನ್ನು ಇದೇ ಅರ್ಜುನ ಕಲಾಕೃತಿ ನೀಡಿ ಸನ್ಮಾನಿಸಲಾಗಿತ್ತು. ಚಿಟ್ಟಾಣಿ ಅಚ್ಚು ಬಾಗಿಲಲ್ಲಿ ಪಡಿಮೂಡಿಸುವುದು ಹೇಗಪ್ಪಾ ಎನ್ನುವ ಆತಂಕ ಶಿವರಾಮರಿಗಿತ್ತು. ಕಾರಣ ಹೆಚ್ಚು ಕಡಿಮೆಯಾದರೆ ಬೇರೆಯದೇ ಮರ ತರಬೇಕು, ಕಲಾಕೃತಿಯಲ್ಲಿ ಚಿಟ್ಟಾಣಿ ಪ್ರತಿಬಿಂಬಿಸದಿದ್ದರೆ ಮಾಡಿದ್ದೆಲ್ಲ ವ್ಯರ್ಥ. ಶಿವರಾಮರ ಶ್ರಮ ಫಲ ಕೊಟ್ಟಿದೆ.

ಚಿಟ್ಟಾಣಿ ಕಲಾಕೃತಿ ನಿರ್ಮಾಣಕ್ಕೆ 45 ಸಾವಿರ ರೂ. ವೆಚ್ಚವಾಗಿದ್ದು 200ಕ್ಕೂ ಅಧಿಕ ದೇವಳ, ಹಾಲ್‌ಗಳ ಬಾಗಿಲಲ್ಲಿ ನಾನಾ ದೇವರ ಕಲಾಕೃತಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಶಿವರಾಮ ಆಚಾರಿ ಧಾರವಾಡ ಸರಕಾರಿ ಚಿತ್ರ ಕಲಾ ಶಾಲೆಯಿಂದ ಆರ್ಟ್ ಮಾಸ್ಟರ್ ಡಿಪ್ಲೊಮಾ(ಆರು ವರ್ಷ) ಪಡೆದಿದ್ದಾರೆ.

ನಾನು ಚಿಟ್ಟಾಣಿ ಅಭಿಮಾನಿ. ಕವಲಕ್ಕಿ ಚಂದ್ರಹಾಸ ಆಚಾರ್ ಮರದ ಕೆಲಸ ಮಾಡಿದರೆ ನಾನು ಕೆತ್ತನೆ ಕೆಲಸ ಮಾಡಿದೆ. ಬೆಂಗಳೂರಿನಲ್ಲಿರುವ ಯಕ್ಷ ಕಲಾವಿದೆ ಅರ್ಪಿತಾ ಹೆಗಡೆಯವರ ತಾಯಿ ಚಿಟ್ಟಾಣಿ ಗೃಹ ಪ್ರವೇಶಕ್ಕೆ ಬಂದಿದ್ದವರು ತಮ್ಮ ಮಗಳ ಕೃಷ್ಣನ ವೇಷದ ಕಲಾಕೃತಿಯನ್ನು ಬೆಂಗಳೂರಿನ ಮನೆ ಬಾಗಿಲಿಗೆ ನನ್ನಿಂದಲೇ ಮಾಡಿಸಿದ್ದಾರೆ. ಇಲ್ಲೇ ನಿರ್ಮಿಸಿ ಕಳಿಸಲಾಗಿದೆ. - ಶಿವರಾಮ ಆಚಾರಿ, ಮೂರೂರು ಕಲ್ಲಬ್ಬೆ, ಕುಮಟಾ.

ನನ್ನದೇ ಮನೆ ಬಾಗಿಲಿಗೆ ನನ್ನದೇ ವೇಷದ ಕಲಾಕೃತಿ ಸ್ವಾಗತಿಸುವ ಪರಿಯಲ್ಲಿ ಕಲಾವಿದರು ಚೆನ್ನಾಗಿ ಚಿತ್ರಿಸಿದ್ದಾರೆ. ಮನೆಯಲ್ಲಿ ನಾನಿಲ್ಲದಿದ್ದರೂ ಎಲ್ಲರಿಗೂ ಬಾಗಿಲಲ್ಲಿ ಸ್ವಾಗತವಂತೂ ಗ್ಯಾರಂಟಿ. - ಚಿಟ್ಟಾಣಿ ರಾಮಚಂದ್ರ ಹೆಗಡೆ, ಪದ್ಮಶ್ರೀ ಪುರಸ್ಕೃತ, ಯಕ್ಷಗಾನ ಹಿರಿಯ ಕಲಾವಿದ.



ಕೃಪೆ : http://vijaykarnataka.indiatimes.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ